	ಕುರುಕ್ಷೇತ್ರ 2	

	ಗ್ರಾಮಾಭಿವೃದ್ಧಿಯ ಸಂದೇಶ ಸಾರುವ ನವದೆಹಲಿಯಿಂದ ಪ್ರಕಟವಾಗುವ ಮಾಸಪತ್ರಿಕೆ. ಇಂಗ್ಲಿಷ್ ಮತ್ತು ಹಿಂದಿ ಎರಡು ಭಾಷೆಗಳಲ್ಲೂ ಪ್ರತ್ಯೇಕವಾಗಿ ಪ್ರಕಟವಾಗುತ್ತದೆ. ಇದು ಭಾರತ ಸರ್ಕಾರದ ಪ್ರಕಟಣ ವಿಭಾಗದಿಂದ ಪ್ರಕಾಶಿತ. 1970ರ ಮೇ ವರೆಗೂ ಇದು ಮಾಸಿಕವಾಗಿತ್ತು. ಜೂನ್ ತಿಂಗಳಿಂದ ಪಕ್ಷಪತ್ರಿಕೆಯಾಯಿತು. 1954ರಿಂದ ಭಾರತ ಸರ್ಕಾರದಿಂದ ಪ್ರಕಟವಾಗುತ್ತಿದ್ದ ಪಂಚಾಯತ್ ರಾಜ್ ಎಂಬ ಮಾಸ ಪತ್ರಿಕೆಯನ್ನು ಆಗ ಇದರಲ್ಲಿ ವಿಲೀನಗೊಳಿಸಲಾಯಿತು. ಕುರುಕ್ಷೇತ್ರದ ಇಂಗ್ಲಿಷ್ ಪ್ರಕಟಣೆ 1952ರಲ್ಲೂ ಹಿಂದಿ ಪ್ರಕಟಣೆ 1955ರಲ್ಲೂ ಆರಂಭವಾದುವು. ಈಗ ಮಾತ್ರ ಮಾಸಪತ್ರಿಕೆಯಾಗಿದೆ. ವ್ಯವಸಾಯ, ವಾಣಿಜ್ಯ, ಸಹಕಾರ, ಆರ್ಥಿಕ, ಸಾಮಾಜಿಕ ವಿಚಾರಗಳು, ಪಂಚಾಯತ್ ರಾಜ್ಯ-ಗ್ರಾಮಾಭಿವೃದ್ಧಿಗೆ ಸಂಬಂಧಪಟ್ಟ ವಿಷಯಗಳನ್ನು ಕುರಿತ ಲೇಖನಗಳಿರುತ್ತವೆ.							
	(ಎಸ್.ಬಿ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ